ಬಸವರಾಜ ಬೊಮ್ಮಾಯಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಸಂಪದ್ಭರಿತ ಕರ್ನಾಟಕ ನಿರ್ಮಾಣಕ್ಕೆ ಸಂಕಲ್ಪ: ಮುಖ್ಯಮಂತ್ರಿ

know_the_cm

(ಹಿರಿಯೂರು, ಚಿತ್ರದುರ್ಗ), ನವೆಂಬರ್ 22, 2022

-ಇನ್ನು ಮುಂದೆ ವಾಣಿವಿಲಾಸ ವಾಟರ್ ಗ್ರಿಡ್ ಗೆ ನೀರು ಸದಾ ಬರುವಂತೆ ಮಾಡಿ ಬರಡು ಕರ್ನಾಟಕ ಎಂಬ ಹೆಸರನ್ನು ಅಳಿಸಿ ಸಂಪದ್ಭರಿತ ಕರ್ನಾಟಕ ವನ್ನಾಗಿ ಪರಿವರ್ತಿಸಲು ನಾವು ಸಂಕಲ್ಪ ಮಾಡಿದ್ದೇವೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

-ಅವರು ವಾಣಿವಿಲಾಸಸಾಗರಕ್ಕೆ ಬಾಗಿನ ಅರ್ಪಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

-ಇದೊಂದು ಐತಿಹಾಸಿಕ ಕ್ಷಣ, ಸ್ವಾತಂತ್ರ್ಯ ನಂತರ 75 ವರ್ಷಗಳ ನಂತರ ಬಾಗಿನ ನೀಡುವ ಸೌಲಭ್ಯ ನಮ್ಮೆಲ್ಲರಿಗೂ ಲಭಿಸಿದೆ. ಮಹಾರಾಜರ ಕಾಲದಲ್ಲಿ ಕಟ್ಟಿರುವ ವಾಣಿವಿಲಾಸ ಸಾಗರ ಅತ್ಯಂತ ಭವ್ಯ ಹಾಗೂ ಉಪಯುಕ್ತವಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಸಂಯೋಜಿಸಿ ತಳಹಂತದ ಜಮೀನುಗಳಿಗೆ ಈಗಾಗಲೇ ಹನಿ ನೀರಾವರಿ ಯೋಜನೆ ರೂಪಿಸಲಾಗಿದೆ. ಈ ಕಾರ್ಯವನ್ನು ಸಂಪೂರ್ಣ ಮಾಡಿ ಭಾರತ ಸರ್ಕಾರದ ಹೂಡಿಕೆ ಮಂಡಳಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯನ್ನು ಅನುಮೋದಿಸಿದ್ದು ಬರುವ ದಿನಗಳಲ್ಲಿ ಕೇಂದ್ರ ಸಂಪುಟದ ಅನುಮೋದನೆ ಆದ ಕೂಡಲೇ ನಮಗೆ 16 ಸಾವಿರ ಕೋಟಿ ರೂ.ಗಳಷ್ಟು ಅನುದಾನ ಒದಗಿ ಬರುವ ನಿರೀಕ್ಷೆಯಲ್ಲಿದ್ದೇವೆ ಎಂದರು.

ಮೈಸೂರು ಅರಸರ ಕುಟುಂಬಕ್ಕೆ ಕೃತಜ್ಞತೆ:

-88 ವರ್ಷಗಳಿಗೂ ಮುನ್ನ ವಾಣಿವಿಲಾಸ ಸಾಗರ ತುಂಬಿತ್ತು. ನಂತರ ಈ ವರ್ಷ ತುಂಬಿ ಹರಿದಿದೆ. ಇದೊಂದು ರೀತಿಯಲ್ಲಿ ನಮ್ಮ ಕೇಂದ್ರ ಕರ್ನಾಟಕದ ನೀರು ಸಂಗ್ರಹ ಗ್ರಿಡ್ ಇದು. ಇದನ್ನು ತುಂಬಿಸುವ ಮೂಲಕ ಚಿತ್ರದುರ್ಗ, ತುಮಕೂರು ದಾವಣಗೆರೆ ಭಾಗಗಳಲ್ಲಿ ನೀರಾವರಿ ಸೌಲಭ್ಯ ನೀಡಲು ಸಾಧ್ಯವಾಗಿದೆ. ಹಿಂದಿನ ಕಾಲದಲ್ಲಿ ಈ ಭಾಗದ ಪಶ್ಚಿಮ ಘಟ್ಟಗಳಿಂದ ಬರುವ ನೀರನ್ನು ಶೇಖರಣೆ ಮಾಡಿ ಎಲ್ಲರಿಗೂ ಒದಗಿಸಬೇಕೆಂದು ಆರ್ಥಿಕ ಸಂಕಷ್ಟವಿದ್ದರೂ ಕೂಡ ತಮ್ಮ ಮನೆತನದ ಒಡವೆಗಳನ್ನು ಮಾರಿ ಕಟ್ಟಿರುವುದನ್ನು ನಾವು ಮರೆಯಲು ಸಾಧ್ಯವಿಲ್ಲ. ಇಡೀ ಒಡೆಯರ ಕುಟುಂಬಕ್ಕೆ ರಾಜ್ಯದ ಜನತೆಯ ಪರವಾಗಿ ಅಭಿನಂದನೆ ಹಾಗೂ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದರು.

know_the_cm

ದೇಶದ ಸುರಕ್ಷತೆಯ ದೃಷ್ಟಿಯಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ:

-18 ಸ್ಲೀಪರ್ ಸೆಲ್ ಗಳನ್ನು ಪತ್ತೆ ಹಚ್ಚಿ ತಿಹಾರ್ ಜೈಲಿಗೆ ಕರ್ನಾಟಕ ಪೊಲೀಸ್ ಕಳಿಸಿದ್ದಾರೆ. ಆದರೂ ತಮ್ಮ ಪ್ರಯತ್ನಗಳನ್ನು ಕೆಲವರು ಹೊರ ರಾಜ್ಯಗಳ ಸಂಪರ್ಕ ಬೆಳೆಸಿ ಇಲ್ಲಿ ಕಾರ್ಯಾಚರಣೆ ಮಾಡುತ್ತಿದ್ದರು. ಈಗಾಗಲೇ ಹಿರರಾಜ್ಯದಿಂದ ಬರುವವರನ್ನು ಹಿಡಿಯಲಾಗಿದೆ. ದೇಶದ ಸುರಕ್ಷತೆಯ ದೃಷ್ಟಿಯಿಂದ ಗಂಭೀರವಾಗಿ ಪರಿಗಣಿಸಿದ್ದೇವೆ. ಈಗ 24 ಗಂಟೆಗಳೊಳಗೆ ಸಿಕ್ಕಿ ಬಿದ್ದವನ ಹಿಂದಿರುವ ಸಂಸ್ಥೆಯ ಹೆಸರು ಬೇಧಿಸಲು ಎನ್.ಎ. ಐ ಕ್ರಮಗಳನ್ನು ತೆಗೆದುಕೊಂಡಿದೆ ಎಂದರು.

Govt committed to build a resourceful Karnataka: CM Bommai

(Hiriyur, Chitradurga), November 22, 2022

-Henceforth, regular water flow will be ensured to Vani Vilasa Watergrid to remove the tag as 'Barren Karnataka' and the state government is committed to making making Karnataka as a prosperous State, said Chief Minister Basavaraj Bommai.

-Talking to reporters after offering the bagina to Vani Vilasa Sagar here on Tuesday, he said it is a historic movement as they have got an opportunity to offer the bagina 75 years after the independence. The dam, constructed by the Maharajas of Mysore, is not only beautiful but also useful.

-A scheme has been evolved to link this to the Upper Bhadra project and provide drip irrigation facilities to the fields situated in low-lying areas. Once this is done, the Government of India in its Investment Board has approved the Upper Bhadra Scheme and Rs 16,000 crore grant is expected from the Union Government towards this project.

Indebted to Mysore Royal family:

-Bommai said the Vani Vilasa Dam has filled to the brim after 88 years and this dam is like the Central Karnataka Water Storage grid. The impounded water could be used for irrigation purposes in Chitradurga, Tumkur and Davangere areas. With a view to providing water to the people of this region from the rain water from the Western Ghats, sold the jewellry to build this dam despite the financial crisis, only with the helping people. The government is indebted to the Wadiyar family for such a noble gesture.

Taken incident seriously:

-The CM said Karnataka police have identified 18 sleeper cells and sent them to Tihar jail. The accused were in touch with their contacts in other states and operating. Those from outside states have been arrested. This case has been taken seriously in the interest of the country's security. The National Investigative Agency has taken steps to crack the organisation which has been behind the arrested person within 24 hours.

know_the_cm

*************