ಬಸವರಾಜ ಬೊಮ್ಮಾಯಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ತಳಮಟ್ಟದಲ್ಲಿ ಕೆಲಸ ಮಾಡುವವರಿಗೆ ಆತ್ಮಗೌರವ ತುಂಬಬೇಕು: ಮುಖ್ಯಮಂತ್ರಿ

know_the_cm

(ಬೆಂಗಳೂರು), ಸೆಪ್ಟೆಂಬರ್ 23, 2022

-ಪೌರಕಾರ್ಮಿಕರು ಅತ್ಯಂತ ತಳಮಟ್ಟದಲ್ಲಿ ಕೆಲಸ ಮಾಡುತ್ತಾರೆ, ಅವರಲ್ಲಿ ಆತ್ಮವಿಶ್ವಾಸ ಮತ್ತು ಆತ್ಮಗೌರವ ತುಂಬಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

-ಪೌರಕಾರ್ಮಿಕರ ದಿನಾಚರಣೆಯ ಅಂಗವಾಗಿ ಬೆಳಗಿನ ಉಪಾಹಾರವನ್ನು ಪೌರಕಾರ್ಮಿಕರೊಂದಿಗೆ ಮುಖ್ಯ ಮಂತ್ರಿಗಳು ಸೇವಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

know_the_cm

-ಪೌರಕಾರ್ಮಿಕರಿಗೆ ಸೇವಾ ಭದ್ರತೆ ಇರದಿದ್ದ ಕಾರಣ ಸಮಿತಿ ರಚಿಸಲಾಗಿತ್ತು. ಸಮಿತಿಯ ಶಿಫಾರಸ್ಸಿನಂತೆ ಹಂತ ಹಂತವಾಗಿ ಸುಮಾರು 43 ಸಾವಿರ ಪೌರಕಾರ್ಮಿಕರನ್ನು ಖಾಯಂಗೊಳಿಸಲು ಆದೇಶಿಸಲಾಗಿತ್ತು. ಅದರ ಮೊದಲ ಕಂತಾಗಿ 11,137 ಪೌರಕಾರ್ಮಿಕರ ಹುದ್ದೆಗಳನ್ನು ಖಾಯಂಗೊಳಿಸಲಾಗಿದೆ. 2 ನೇ ಹಾಗೂ 3 ನೇ ಕಂತಿನಲ್ಲಿ ಪೂರ್ತಿ ಮಾಡಲಾಗುವುದು ಎಂದರು.

-ಸರ್ಕಾರದ ಈ ಉಪಕ್ರಮದಿಂದ ಈ ವರ್ಗದ ಜನರಲ್ಲಿ ಆತ್ಮವಿಶ್ವಾಸ ತುಂಬಿದೆ. ಇಷ್ಟು ವರ್ಷದ ನಮ್ಮ ಕಠಿಣ ಪರಿಶ್ರಮಕ್ಕೆ ನ್ಯಾಯ ಸಿಕ್ಕಿರುವ ಭಾವನೆ ಇದೆ. ಮಾನವೀಯತೆಯಿಂದ ಅವರ ಭಾವನೆಗಳಿಗೆ ಗೌರವ ನೀಡಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.

ಕಾಮನ್ ಮ್ಯಾನ್ ಸಿಎಂ ಎನ್ನುವುದನ್ನು ಮತ್ತೆ ಸಾಬೀತುಪಡಿಸಿದ ಮುಖ್ಯಮಂತ್ರಿ

-ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರೇಸ್ ಕೋರ್ಸ್ ರಸ್ತೆ ನಿವಾಸದಲ್ಲಿ ಸಡಗರದ ವಾತಾವರಣ. ಮೊನ್ನೆಯಷ್ಟೇ ತಮ್ಮ ಸೇವೆ ಕಾಯಂಗೊಂಡ ಸಿಹಿ ಸುದ್ದಿ ಪಡೆದಿದ್ದ ಪೌರ ಕಾರ್ಮಿಕ ಮಹಿಳೆಯರಿಗೆ ಇಂದು ಮುಖ್ಯಮಂತ್ರಿ ಯವರೊಂದಿಗೆ ಬೆಳಗ್ಗಿನ ಉಪಾಹಾರ ಸವಿಯುವ ಅವಕಾಶ. ಇದು ಅವರಲ್ಲಿ ಹೆಚ್ಚಿನ ಉತ್ಸಾಹ ಮೂಡಿಸಿತ್ತು.

-ತಾವು ಎದುರು ನೋಡುತ್ತಿದ್ದ ವ್ಯಕ್ತಿ ಬರುತ್ತಿದ್ದಂತೆ ಅವರನ್ನು ಸುತ್ತುವರಿದು, ಶಾಲು, ಹಾರ, ಫಲ ತಾಂಬೂಲ ಅರ್ಪಿಸಿದವರ ನೋಟದಲ್ಲಿ ಕೃತಜ್ಞತೆಯ ಭಾವ ಮನೆ ಮಾಡಿತ್ತು.

-ಅವರ ಕುಶಲೋಪರಿ ವಿಚಾರಿಸಿದ ಮುಖ್ಯಮಂತ್ರಿಗಳು ನಿಮ್ಮ ಆರೋಗ್ಯ, ನಿಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಸರ್ಕಾರ ಕಾಳಜಿ ವಹಿಸಲಿದೆ ಎಂದು ಭರವಸೆ ತುಂಬಿದರು. ಜೊತೆಗೆ ನಿಮ್ಮ ಮನೆ ಗಂಡು ಮಕ್ಕಳ ಬಗ್ಗೆ ನಿಗಾ ವಹಿಸಿ ಎಂದು ಕಿವಿಮಾತು ಹೇಳಲು ಮರೆಯಲಿಲ್ಲ.

know_the_cm

-ನಂತರ ಪೌರ ಕಾರ್ಮಿಕರಿಗೆ ತಿಂಡಿ ಬಡಿಸಿದ ಮುಖ್ಯಮಂತ್ರಿಯವರು ತಮ್ಮ ಪಕ್ಕ ಕುಳಿತ ಭಾರತಿ ಅವರೊಂದಿಗೆ ಮಾತಿಗಿಳಿದರು. ಅವರ ವೇತನ ಸರಿಯಾಗಿ ಆಗುತ್ತಿದೆಯೇ, ಕೆಲಸದ ಸ್ಥಳದಲ್ಲಿ ಸೂಕ್ತ ಸೌಲಭ್ಯಗಳು ದೊರೆಯುತ್ತಿವೆಯೇ.. ಹೀಗೆ ಹಲವು ವಿಷಯಗಳ ಕುರಿತು ಮಾಹಿತಿ ಪಡೆದರು.

-ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಪೌರ ಕಾರ್ಮಿಕರಿಗೆ ಆತ್ಮವಿಶ್ವಾಸ ಹಾಗೂ ಆತ್ಮ ಗೌರವ ಮೂಡಿಸುವ ಕೆಲಸ ಮಾಡುವುದಾಗಿ ತಿಳಿಸಿದರು.

-ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ. ಪಾಟೀಲ, ಕೋಟ ಶ್ರೀನಿವಾಸ ಪೂಜಾರಿ, ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.

Chief Minister stresses on creating confidence in Pourakarmikas

(Bengaluru), September 23, 2022

-The Pourakarmikas do the manial job and there is a need to instill self-confidence and self-respect in them, opined Chief Minister Basavaraj Bommai.

-Speaking to reporters after having breakfast with Pourakarmikas on the occasion of 'Pourakarmikas Day' here on Friday, he said a committee had been constituted since they didn't have the job security. As per recommendation of the panel, an order has been issued to regularise the services of 43000 Pourakarmikas in a phased manner. As the first installment, the service of 11,137 Pourakarmikas were regularised. The rest would be covered in the second and the third installments.

-This act of the government has created confidence in them and they have felt that justice had been done for their long drawn struggle. Programs will be chalked out on humanitarian grounds and respecting their feelings, Bommai said.

Chief Minister Basavaraj Bommai proves again that he is "Common Man" CM

-A festive atmosphere prevailed at the Race Course residence of Chief Minister Basavaraj Bommai in Bengaluru on Friday. After getting the good news about regularisation of their jobs, the women Pourakarmikas were waiting to have breakfast with the CM. They were waiting with the bated breathe to see the "Common Man" CM Bommai and to enjoy breakfast with him.

-As he came out, they surrounded him and presented him the shawls, fruits to express their gratitude for fulfilling their long pending demand of regularisation of their jobs.

-In an informal chat with them, the CM said the government would take care of their health and education of their kids but he did not forget to give a piece of advice "have an eye on the male family members".

-Personally serving them, Bommai sat next to Bharati, a lady Pourakarmika, and enquired whether she was getting the salary in time, facilities available at the work spot and other issues. Later, he told the reporters that he would work to instill confidence and self-respect in them.

-Ministers Govind Karjol, C.C.Patil, Kota Srinivasa Poojari and Safai Karmacharis Commission Chairman Shivanna were present.

know_the_cm

*************