ಬಸವರಾಜ ಬೊಮ್ಮಾಯಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಹೊಟೆಲ್ ಉದ್ಯಮಕ್ಕೆ ಪ್ರವಾಸೋದ್ಯಮದಲ್ಲಿ ಬೆಳೆಯಲು ಸಾಕಷ್ಟು ಅವಕಾಶ ಇದೆ: ಮುಖ್ಯಮಂತ್ರಿ

know_the_cm

(ಬೆಂಗಳೂರು), ಸೆಪ್ಟೆಂಬರ್ 20, 2022

-ಹೊಟೆಲ್ ಉದ್ಯಮ ಅತ್ಯಂತ ಮಹತ್ವದ್ದಾಗಿದ್ದು ಪ್ರವಾಸೋದ್ಯಮದಲ್ಲಿ ಸಾಕಷ್ಟು ಅವಕಾಶಗಳಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದರು.

-ಬೃಹತ್ ಬೆಂಗಳೂರು ಹೋಟೆಲುಗಳ ಸಂಘ ನಗರದ ಖಾಸಗೀ ಹೊಟೆಲ್ ನಲ್ಲಿ ಆಯೋಜಿಸಿದ್ದ '2022 ಫುಡ್ ಅವಾರ್ಡ್' ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಾಲ್ಗೊಂಡು ಜೀವಮಾನದ ಸಾಧನೆ ಮತ್ತು ಉದಯೋನ್ಮುಖ ಮಹಿಳಾ ಉದ್ಯಮಿ ಪ್ರಶಸ್ತಿ ನೀಡಿ ಗೌರವಿಸಿದರು.

-ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ಬಂದ್ ಗೆ ಕರೆಕೊಟ್ಟ ಸಮಯದಲ್ಲಿ ಹೊಟೆಲ್ ಗಳು ಬಂದ್ ಆಗದಿದ್ದರೆ ಆ ಬಂದ್ ಯಶಸ್ವಿಯಾಗುವುದಿಲ್ಲ‌.ಎಲ್ಲರೂ ಕೆಲಸದಲ್ಲಿದ್ದಾಗ ನೀವು ಬಂದ್ ಮಾಡಿದರು ಅದು ನಿಜವಾದ ಬಂದ್ ಆಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

-"ನಮ್ಮ ಮನೆಯವರು ಮನೆಯಲ್ಲಿ ಇಲ್ಲದಿರುವಾಗ ನೀವೇ ನಮ್ಮ ಮನೆಯವರಾಗುತ್ತೀರಿ‌. ರಾತ್ರಿ ಎಷ್ಟೇ ತಡವಾದರೂ ಹೊಟೆಲ್ ನವರು ನಮಗೆ ನಗುನಗುತ ಸೇವೆ ಕೊಡ್ತಾರೆ. ಕೊರೊನಾ ಸಂದರ್ಭದಲ್ಲಿ ನೀವು ಸಾಕಷ್ಟು ಸಮಸ್ಯೆ ಎದುರಿಸಿದ್ದೀರಿ. ಸರ್ಕಾರಕ್ಕೆ ಸಹಕಾರವನ್ನೂ ನೀಡಿದ್ದೀರಿ, ನಿಮಗೆ ಧನ್ಯವಾದಗಳು ಎಂದು ಸಿಎಂ ಬೊಮ್ಮಾಯಿ ಹೇಳಿದರು‌.

-ಹೊಟೆಲ್ ಉದ್ಯಮ ಯಶಸ್ವಿ ಆಗಬೇಕು ಅಂದ್ರೆ ಅದರ ಸೇವೆ ಬಹಳ ಮುಖ್ಯ. ದೊಡ್ಡ ಹೊಟೆಲ್ ಇಟ್ಟುಕೊಂಡು ಸರಿಯಾದ ಸೇವೆ ಇಲ್ಲ ಅಂದರೆ ಪ್ರಯೋಜನ ಇಲ್ಲ. ಆದ್ದರಿಂದ ಹೊಟೆಲ್ ಉದ್ಯಮಕ್ಕೆ ಉತ್ತಮ ತರಬೇತಿ ಪಡೆದಿರುವ ಕೆಲಸಗಾರರು ಬೇಕು. ಈ ನಿಟ್ಟಿನಲ್ಲಿ ಹೊಟೆಲ್ ಸೇವೆಗಳಿಗೆ ಕಾರ್ಮಿಕ ಇಲಾಖೆಯಿಂದ ಫಿನಿಷಿಂಗ್ ಸ್ಕೂಲ್ ತೆಗೆದರೆ ರಾಜ್ಯಕ್ಕೆ ಒಳ್ಳೆಯ ಹೆಸರು ಬರುತ್ತದೆ ಜತೆಗೆ ಪ್ರವಾಸೋದ್ಯಮಕ್ಕೆ ಉತ್ತಮ ಬೆಂಬಲ ಸಿಗುತ್ತದೆ‌ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

-ಹೊಟೆಲ್ ಉದ್ಯಮಕ್ಕೆ ಪ್ರವಾಸೋದ್ಯಮದಲ್ಲಿ ಸಾಕಷ್ಟು ಅವಕಾಶ ಇದೆ. ಬೇರೆ ರಾಜ್ಯಗಳಲ್ಲಿ ಪ್ರವಾಸೊದ್ಯಮದಲ್ಲಿ ಹೊಟೆಲ್ ಗಳು ತೊಡಗಿಸಿಕೊಂಡಷ್ಟು ಶೇ 50 ರಷ್ಟು ಕೂಡ ನಮ್ಮ ರಾಜ್ಯದಲ್ಲಿ ತೊಡಗಿಕೊಂಡಿಲ್ಲ. ನಿಮಗೆ ಏನು ಸಹಕಾರ ಬೇಕೊ ನಾನು ಕೊಡಲು ಸಿದ್ದನಿದ್ದೇನೆ. ಪ್ರವಾಸೋದ್ಯಮಕ್ಕೆ ನೀವು ಎಂಡ್ ಟು ಎಂಡ್ ಅಪ್ರೋಚ್ ನೀಡಬೇಕು. ಇದಕ್ಕೆ ಬೇಕಿರುವ ಸಿಂಗಲ್ ವಿಂಡೋ ವ್ಯವಸ್ಥೆಯನ್ನು ಶೀಘ್ರವೇ ಜಾರಿಗೆ ತರುವ ಕೆಲಸ ಮಾಡುತ್ತೀನಿ ಎಂದು ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದರು.

-ನೀವು ಪ್ರವಾಸೋದ್ಯಮ ಇಲಾಖೆಯೊಂದಿಗೆ ನೊಂದಣಿ ಮಾಡಿಕೊಂಡರೆ ಹೊಟೆಲ್ ಉದ್ಯಮ ಎಂದು ಪರಿಗಣಿಸುತ್ತೇನೆ ಎಂದು ಹೊಟೆಲ್ ಮಾಲೀಕರ ಬೇಡಿಕೆಗೆ ಉತ್ತರ ನೀಡಿದರು. 24 x7 ಆಹಾರ ಸರಬರಾಜಿಗೆ ಅವಕಾಶ ನೀಡುವ ಬಗ್ಗೆ ತಕ್ಷಣ ಹೇಳಲು ಆಗುವುದಿಲ್ಲ‌. ಅದು ಪರಿಸ್ಥಿತಿಗೆ ತಕ್ಕಂತೆ ಬದಲಾಗುತ್ತದೆ. ಇದನ್ನೂ ಆದಷ್ಟು ಪರಿಗಣಿಸಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

-ಹೊಟೆಲ್ ಉದ್ಯಮ ಸ್ಕೇಲ್ ಅಪ್ ಆಗಬೇಕು. ನಿಮಗೆ ಬ್ಯಾಂಕ್ ಅವರು ಸುಲಭವಾಗಿ ಸಾಲ‌ ನೀಡುತ್ತಾರೆ. ಕಠಿಣ ಶ್ರಮದಿಂದ ಮಾತ್ರ ಉದ್ಯಮ ಬೆಳೆಸಲು ಸಾಧ್ಯ. ಹೊಟೆಲ್ ಉದ್ಯಮಕ್ಕೆ ಸಾಕಷ್ಟು ಅವಕಾಶ ಇದೆ. ನೀವು ನಿಮಗಾಗಿ ಪ್ರಾಮಾಣಿಕರಾಗಬೇಕು. ಅಲ್ಲದೇ ರಾಜ್ಯದಲ್ಲಿ ನಿಮಗೆ ವ್ಯವಹಾರ ಸ್ನೇಹಿ ಸರ್ಕಾರ ಇದೆ. ಇದನ್ನು ಬಳಸಿಕೊಂಡು ಅತ್ಯಂತ ಯಶಸ್ವಿಯಾಗಿ ಬೆಳೆಯಬೇಕು.ಆ ಮೂಲಕ ರಾಜ್ಯವೂ ಅಭಿವೃದ್ದಿಯಾಗಬೇಕು ಎಂದು ಉದ್ಯಮಿಗಳಿಗೆ ಮುಖ್ಯಮಂತ್ರಿಗಳು ಕರೆನೀಡಿದರು.

-ಕಾರ್ಯಕ್ರಮದಲ್ಲಿ ಸಚಿವರಾದ ಮುರುಗೇಶ್ ನಿರಾಣಿ, ಶಿವರಾಮ್ ಹೆಬ್ಬಾರ್, ಬೆಂಗಳೂರು ಹೊಟೆಲ್ ಸಂಘದ ಅಧ್ಯಕ್ಷ ಪಿಸಿ ರಾವ್ ಸೇರಿದಂತೆ ಹಲವರು ಉಪಸ್ಥಿತರಿಸ್ದರು.

Opportunities are plenty for hotel industry to grow in tourism industry, says Chief Minister

(Bengalure), September 20, 2022

-Hotel industry is very important and it has a lot of scope to grow in tourism industry, opined Chief Minister Basavaraj Bommai.

-He was speaking at a function '2022 Food Awards', presentation of 'lifetime achievement award' and 'upcoming women entrepreneur award' organised by Bengaluru Hoteliers Association here on Tuesday.

-The CM said no bundh will be effective if the hotels are not closed. The real bundh is when you close your hotels when others are working. "You will become our family members when our family is not at home. No matter how late it may be but still you serve the customers with a smile. The hotel industry faced a lot of problems during Covid-19 pandemic but you still co-operated with the government. A big thanks for you".

-Bommai said service is very important for the success of the hotel industry. What's the use of having the big hotels if the service is not good. So, this industry requires well-trained staff. If the Department of Labour opens a finishing school to impart training in hotel services, it will definitely bring a good name to the State. Along with this, it will also provide good support to the tourism industry. There are a lot of opportunities in the hotel industry but not even 50 per cent of hotels of Karnataka are involved in the tourism department when compared with other states. The government is ready to provide whatever assistance they require to enable them to give an end to end approach to the tourism industry. The system of single window agency will be implemented by the government, he added.

-Replying to a demand, the CM said the government will consider hotels as an industry if they register their establishments with the Department of Tourism. As of now it is very difficult to allow the food supply 24X 7 but it will be changed according to the situation. All these will be considered at the earliest. "I want the hotel industry to scale-up and then banks will give loans easily. The industry can grow only out of hard work. There is a lot of scope for the hotel industry for which they need to be honest. SInce there is a business-friendly government in the state, you must take advantage of this opportunity to achieve success. It will help in the growth of the state too, Bommai noted.

-Large & Medium Scale Industries Minister Murgesh Nirani, Labour Minister Shivaram hebbar, Bengaluru Hoteliers Association President P.C.Rao and others were present.

know_the_cm

*************