ಬಸವರಾಜ ಬೊಮ್ಮಾಯಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಸ್ವಯಂ ಮೌಲ್ಯಮಾಪನದ ಆಧಾರದ ಮೇಲೆ ಕೈಗಾರಿಕೆಗಳಿಗೆ ತೆರಿಗೆ: ಮುಖ್ಯಮಂತ್ರಿ

know_the_cm

(ಹುಬ್ಬಳ್ಳಿ), ಜುಲೈ 16, 2022

-ಸ್ವಯಂ ಮೌಲ್ಯಮಾಪನದ ಆಧಾರದ ಮೇಲೆ ಕೈಗಾರಿಕೆಗಳಿಗೆ ತೆರಿಗೆ ವಿಧಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

-ಅವರು ಕರ್ನಾಟಕ ವಾಣಿಜ್ಯೋದ್ಯಮ ಸಂಘ ಆಯೋಜಿಸಿದ್ದ ರಾಜ್ಯ ಮಟ್ಟದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಸಂಸ್ಥೆಗಳ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

-ಸರ್ಕಾರ ಉದ್ಯೋಗ ನೀತಿಯನ್ನು ಹೊರತರುತ್ತಿದೆ. ನಮ್ಮ ಯುವಕರು ಹಾಗೂ ಮಹಿಳೆಯರ ಕೈಗೆ ಉದ್ಯೋಗ ನೀಡಬೇಕು. ಮಹಿಳೆಯರು ಉದ್ದಿಮೆದಾರರಾಗಬೇಕು. ದೇಶದ ಅತ್ಯಂತ ಹೆಚ್ಚಿನ ರಫ್ತನ್ನು ಕರ್ನಾಟದಿಂದ ಮಾಡಲಾಗುತ್ತದೆ. ರಾಜ್ಯದಲ್ಲಿ ಬಹಳಷ್ಟು ಕೆಲಸಗಳಾಗುತ್ತಿದ್ದು, ಮೌನಕ್ರಾಂತಿಯಾಗುತ್ತಿದೆ. ಜಾಗತಿಕ ಮಟ್ಟದ ತಂತ್ರಜ್ಞಾನದ ಲಾಭವನ್ನು ಪಡೆಯಬೇಕು. ಟಯರ್ -2 ನಗರಗಳಲ್ಲಿ ಹೈಟೆಕ್ ಉದ್ಯಮಗಳನ್ನು ಸರ್ಕಾರ ಉತ್ತೇಜಿಸುತ್ತದೆ. ಸರ್ಕಾರ ಮತ್ತು ಉದ್ಯಮಿಯ ನಡುವೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಸಂಸ್ಥೆಗಳು ವೇಗವರ್ಧಕವಾಗಿ ಕೆಲಸ ಮಾಡಿ, ವ್ಯವಸ್ಥೆಯಲ್ಲಿ ಸುಧಾರಣೆ, ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ತರಬೇಕು. ಈ ಬದಲಾವಣೆಗಳು ಸಾಮಾಜಿಕ ಹೊಣೆಗಾರಿಕೆಯನ್ನೂ ತರಬೇಕು. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯನ್ನು ಎಫ್‍ಕೆಸಿಸಿಐ ಹೊತ್ತುಕೊಳ್ಳಬೇಕು. ಆಸ್ತಿ ತೆರಿಗೆ ಸಮಸ್ಯೆಯಾಗಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು, ಈ ಬಗ್ಗೆ ಕೂಡಲೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು. ಯಾವುದೇ ಸಮಸ್ಯೆ ಇಲ್ಲದಂತೆ ದುಪ್ಪಟ್ಟು ತೆರಿಗೆ ಇರುವುದನ್ನು ಒಂದೇ ತೆರಿಗೆ ಮಾಡಲಾಗುವುದು ಜಿಸ್‍ಟಿಯಲ್ಲಿ ಕೆಲವು ಸಮಸ್ಯೆಗಳ ಬಗ್ಗೆ ಬೆಂಗಳೂರಿನಲ್ಲಿ ಸುದೀರ್ಘ ಚರ್ಚೆ ಮಾಡಿ ಬಗೆಹರಿಸಿಸೋಣ ಎಂದು ತಿಳಿಸಿದರು. ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವ ಸರ್ಕಾರ ನಮ್ಮದು. ಈ ಭಾಗದ ಅಭಿವೃದ್ಧಿಯಾಗಲು ಉದ್ಯೋಗ ಸೃಜನೆಯಾಗಬೇಕು ಎಂದರು.

ಅಂತ:ಕರಣ ಪುನ:ಸ್ಥಾಪನೆ ಆಗಬೇಕಿದೆ:

-21 ನೇ ಶತಮಾನದಲ್ಲಿ ಬದಲಾವಣೆಯನ್ನು ಕಾಣುತ್ತಿದ್ದೇವೆ. ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಗಳು ದೇಶದ ಆರ್ಥಿಕತೆಗೆ ಕೊಡುಗೆ ನೀಡುತ್ತಿದೆ. ಕೈಗಾರಿಕೆ ಮತ್ತು ವಾಣಿಜ್ಯದ ಪರಿಭಾಷೆ ಬದಲಾಗಿದೆ. ಸರ್ಕಾರಗಳ ಚಿಂತನೆ ಬದಲಾಗಿದೆ. ಸರ್ಕಾರಗಳು ಮಾರುಕಟ್ಟೆ ತಂತ್ರಜ್ಞಾನವನ್ನು ಒಪ್ಪಿಕೊಂಡಾಗಿನಿಂದ ಎಲ್ಲ ಪ್ರಮುಖ ಆರ್ಥಿಕ ನಿರ್ಧಾರಗಳು ಮಾರುಕಟ್ಟೆ ಆಧಾರಿತವಾಗಿದೆ. ಖಾಸಗೀಕರಣ, ಉದಾರೀಕರಣ ಮತ್ತು ಜಾಗತೀಕರಣದ ಮಧ್ಯೆ ಅಂತ:ಕರಣವನ್ನು ನಾವು ಮರೆಯುತ್ತಿದ್ದೇವೆ. ಇದು ಸಾಮಾನ್ಯಯ ಮನುಷ್ಯನ ಮೇಲೂ ಇದು ಪರಿಣಾಮ ಬೀರಲಿದೆ. ಅಂತ:ಕರಣವನ್ನು ಪು:ನಸ್ಥಾಪನೆ ಮಾಡಬೇಕಿದೆ ಎಂದರು.

ತಂತ್ರಜ್ಞಾನ ಆಧಾರಿತ ಉದ್ದಿಮೆಗಳಿಗೆ ಅವಕಾಶ:

-ತಂತ್ರಜ್ಞಾನ ಆಧಾರಿತ ಉದ್ದಿಮೆಗಳಿಗೆ ಅವಕಾಶಗಳು ಹೆಚ್ಚಿವೆ. ಟೈಯರ್ 2 ಮತ್ತು 3 ನಗರಗಳಲ್ಲಿ ತಂತ್ರಜ್ಞಾನ ಆಧಾರಿತ ಕೈಗಾರಿಕೆಗಳು ಹೆಚ್ಚಾಗಿ ಸ್ಥಾಪನೆಯಾಗಬೇಕು. ಆಗ ಹೆಚ್ಚಿನ ಅಭಿವೃದ್ಧಿಯಾಗುತ್ತದೆ. ಇಂಥ ಜಿಲ್ಲೆಗಳಲ್ಲಿ ನಮ್ಮಲ್ಲಿ ಬಹಳ ಪ್ರತಿಭೆ ಇದೆ. ಟೈಯರ್ -2 ನಗರಗಳಲ್ಲಿನ ಪ್ರತಿಭೆಯನ್ನು ಬಳಕೆ ಮಾಡುವ ಕೆಲಸವನ್ನು ಎಫ.ಕೆ.ಸಿ.ಸಿ ಐ ಮಾಡಬೇಕು. ಯಾವುದನ್ನು ಹೆಸರಿಸಿದರೂ ಅದು ಕರ್ನಾಟದ ಕೈಗಾರಿಕೆಗಳಲ್ಲಿ ತಯಾರಾಗುತ್ತದೆ. ಗುಲ್ಬರ್ಗಾ ಹಾಗೂ ಬಿಜಾಪುರದಲ್ಲಿ ಮೆಗಾ ಟೆಕ್ಸ್ ಟೈಲ್ ಪಾರ್ಕ್ ಬರಲಿದೆ. ಯಾದಗಿರಿಯಲ್ಲಿ ಫಾರ್ಮಸುಟಿಕಲ್ ಹಬ್ , ಮುಂಬೈ - ಬೆಂಗಳೂರು ಕೈಗಾರಿಕಾ ಕಾರಿಡಾರ್ ನಲ್ಲಿ ಬರುವ ತುಮಕೂರು, ಚಿತ್ರದುರ್ಗ, ಹಾವೇರಿ, ಧಾರವಾಡ, ಬೆಳಗಾವಿಗಳಲ್ಲಿ ಕೈಗಾರಿಕಾ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಹುಬ್ಬಳ್ಳಿ ಅಂಕೋಲ್ ರೈಲ್ವೈ ಯೋಜನೆ ಬರಲಿದೆ. ತುಮಕೂರು-ದಾವಣಗೆರೆ, ಹುಬ್ಬಳ್ಳಿ ಬೆಳಗಾವಿ ರೈಲ್ವೆ ಯೋಜನೆಗೆ ಅನುದಾನ ನೀಡಲಾಗಿದ್ದು, ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗಲಿದೆ. ಕಲ್ಯಾಣ ಕರ್ನಾಟಕದ ರಾಯಚೂರಿನಲ್ಲಿ ವಿಮಾನ ನಿಲ್ದಾಣ , ಶಿವಮೊಗ್ಗ, ಬಿಜಾಪುರದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದೆ. ರಾಜ್ಯದಲ್ಲಿ ಪ್ರವಾಸೋದ್ಯಮ,ಕೈಗಾರಿಕೆ, ಉದ್ಯಮಗಳು ಎಲ್ಲವೂ ಅಭಿವೃದ್ಧಿಯಾಗಬೇಕೆಂಬ ದೂರದೃಷ್ಟಿಯಿಂದ ಸರ್ಕಾರ ಕೆಲಸ ಮಾಡುತ್ತಿದೆ. ನವಕರ್ನಾಟಕದಿಂದ ನವಭಾರತ ನಿರ್ಮಾಣ ಮಾಡುವ ಉದ್ದೇಶದಿಂದ 6 ವಿಶೇಷವಾದ ಟೌನ್‍ಶಿಪ್ ನ್ನು ನಿರ್ಮಿಸಲಾಗುವುದು. ಉತ್ತಮ ಆರೋಗ್ಯ, ಶಿಕ್ಷಣ, ಕೈಗಾರಿಕೋದ್ಯಮಗಳೆಲ್ಲಾ ರಾಜ್ಯದ ಅಭಿವೃದ್ಧಿಯಲ್ಲಿ ಒಂದಕ್ಕೊಂದು ಬೆಸೆದುಕೊಂಡಿದೆ. ಇವೆಲ್ಲವುಗಳನ್ನೂ ಸಂಯೋಜಿಸಿ ಏಕೀಕೃತವಾಗಿ ಕಾರ್ಯನಿರ್ವಹಿಸಬೇಕು ಎಂದರು.

ಕೈಗಾರಿಕೆಗಳು ಬೆಳೆದರೆ ಮಾತ್ರ ಕರ್ನಾಟಕ ಬೆಳೆಯುತ್ತದೆ:

-ಸರ್ಕಾರಿ ಸ್ವಾಮ್ಯದ ಹೆಚ್ ಎ ಎಲ್, ಬಿ ಹೆಚ್ ಇ ಎಲ್ ಸೇರಿದಂತೆ ಹಲವು ಸಂಸ್ಥೆಗಳು ನೀಡಿರುವ ಕೊಡುಗೆಯ ಪ್ರತಿಫಲದಿಂದಾಗಿ ಕರ್ನಾಟಕದಲ್ಲಿ ಐಟಿಬಿಟಿ ಕ್ಷೇತ್ರ ಅಭಿವೃದ್ದಿಗೊಳ್ಳುತ್ತಿದೆ. ರಾಜ್ಯದಲ್ಲಿ ಕೌಶಲ್ಯಭರಿತ ಮಾನವ ಸಂಪನ್ಮೂಲವಿದೆ. ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ 400 ಆರ್ ಎಂಡ್ ಡಿ ಸಂಸ್ಥೆಗಳಿವೆ. 500 ಫಾರ್ಚೂನ್ ಕಂಪನಿಗಳಲ್ಲಿ 400 ಫಾರ್ಚೂನ್ ಸಂಸ್ಥೆಗಳು ಬೆಂಗಳೂರಿನಲ್ಲಿದೆ. ಕರ್ನಾಟಕದ ಸಮಗ್ರ ಅಭಿವೃದ್ಧಿಯಾಗಬೇಕಿದೆ. ಕರ್ನಾಟಕದಲ್ಲಿ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಹೆಚ್ಚಳವಾಗಿದೆ. ಕೈಗಾರಿಕೋದ್ಯಮಿಗಳು ತಮ್ಮ ಕಠಿಣಪರಿಶ್ರಮ, ಬದ್ಧತೆಯಿಂದ ದುಡಿದು ತಮ್ಮ ತಮ್ಮ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಬೇಕು. ತಮ್ಮ ದೃಷ್ಟಿಕೋನವನ್ನು ಬದಲಿಸಿಕೊಂಡು ಸಣ್ಣ ಉದ್ಯಮಿಯಿಂದ ದೊಡ್ಡ ಮಟ್ಟದ ಕೈಗಾರಿಕೋದ್ಯಮಿಯಾಗಿ ಬೆಳೆಯಬೇಕು. ಕೈಗಾರಿಕೆಗಳು ಬೆಳೆದರೆ ಮಾತ್ರ ಕರ್ನಾಟಕ ಬೆಳೆಯುತ್ತದೆ. ಪಿರಮಿಡ್ ತಳಹಂತದಲ್ಲಿರುವ ಶ್ರಮಿಕ ವರ್ಗದವರಿಂದ ಆರ್ಥಿಕತೆ ಬೆಳೆಯುತ್ತದೆ. ರಾಜ್ಯದ ಜನ ಶ್ರೀಮಂತರಾದರೆ ರಾಜ್ಯ ಶ್ರೀಮಂತವಾಗುತ್ತದೆ. ರಾಜ್ಯದಲ್ಲಿ ಈಸ್ ಆಪ್ ಡೂಯಿಂಗ್ ಬಿಸನೆಸ್,ನೂತನ ಕೈಗಾರಿಕಾ ನೀತಿ ರಚಿಸಲಾಗಿದೆ. ಸೆಮಿಕಂಡಕ್ಟರ್ ನೀತಿಯನ್ನು ರೂಪಿಸಲಾಗಿದ್ದು, ಪ್ರಪಂಚದಲ್ಲಿಯೇ ಗುಣಮಟ್ಟದ ಸೆಮಿಕಂಡಕ್ಟರ್ ಉತ್ಪಾದನಾ ಘಟಕವನ್ನು ಕರ್ನಾಟಕದಲ್ಲಿ ಪ್ರಾರಂಭಿಸಲಾಗುವುದು. ದೇಶದ ಶೇ. 43 ರಷ್ಟು ನವೀಕರಿಸಬಹುದಾದ ಇಂಧನ ಕರ್ನಾಟಕ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿದೆ. ಈ ಕ್ಷೇತ್ರದಲ್ಲಿ ವಿದೇಶಿ ಬಂಡವಾಳವೂ ಕರ್ನಾಟಕಕ್ಕೆ ಹರಿದು ಬಂದಿದೆ. ಕರ್ನಾಟಕ ಎಥನಾಲ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಎಂದರು.

know_the_cm

*************