ಬಸವರಾಜ ಬೊಮ್ಮಾಯಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಪಾರಂಪರಿಕ ಕಸುಬುದಾರರ ನೆರವಿಗೆ ಸರ್ಕಾರದ ಆದ್ಯತೆ: ಮುಖ್ಯಮಂತ್ರಿ

know_the_cm

(ಗೃಹ ಕಚೇರಿ ಕೃಷ್ಣಾ, ಬೆಂಗಳೂರು), ಆಗಸ್ಟ್ 27, 2021

-ದೈವಜ್ಞ ಬ್ರಾಹ್ಮಣ ಸಮಾಜ ಹಾಗೂ ಇತರ ಸಮುದಾಯದವರು ತಮ್ಮ ಪಾರಂಪರಿಕ ಕಸುಬನ್ನು ಉಳಿಸಿ ಬೆಳೆಸಲು ಸರ್ಕಾರ ಎಲ್ಲ ರೀತಿಯ ನೆರವು ನೀಡಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಲ್ಲಿ ತಿಳಿಸಿದರು.

-ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಸಂಘದ ಸಮುದಾಯ ಭವನ ನಿರ್ಮಾಣಕ್ಕೆ ವರ್ಚುವಲ್ ಕಾರ್ಯಕ್ರಮದಲಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.

-ಈ ಸಂದರ್ಭದಲ್ಲಿ ಮಾತನಾಡಿದ ಅವರು ಬದಲಾಗುತ್ತಿರುವ ಆರ್ಥಿಕ ವ್ಯವಸ್ಥೆಯಲ್ಲಿ ಕುಲಕಸುಬುಗಳನ್ನು ಉಳಿಸಿ, ಬೆಳೆಸಿಕೊಳ್ಳುವ ವಿವಿಧ ಸಮುದಾಯಗಳ ಪ್ರಯತ್ನ ಅತ್ಯಂತ ಅಭಿಮಾನ ಪಡುವ ವಿಷಯ.

-ಅತ್ಯಂತ ಕೌಶಲ್ಯಪೂರ್ಣ ಕಾಯಕವನ್ನು ಮಾಡುತ್ತಿದ್ದೀರಿ. ವೈಯಕ್ತಿಕ ವಿಶ್ವಾಸ ಮತ್ತು ಸಂಬಂಧ ಗ್ರಾಹಕರ ಜೊತೆಗಿರುತ್ತದೆ. ನಿಮ್ಮ ವೃತ್ತಿಯ ಮಹತ್ವವನ್ನು ಇದು ಸೂಚಿಸುತ್ತದೆ. ಬದಲಾಗುತ್ತಿರುವ ಆರ್ಥಿಕ ವ್ಯವಸ್ಥೆಯಲ್ಲಿ- ವ್ಯಾಪಾರೀಕರಣ, ಜಾಗತೀಕರಣ ಹಾಗೂ ತಂತ್ರಜ್ಞಾನ ಹಾಗೂ ಸ್ಪರ್ಧೆಯಿಂದಾಗಿ ಹಲವರು ಕಸುಬು ಬಿಡುವ ಪರಿಸ್ಥಿತಿ ಬಂದಿದೆ. ಬದಲಾಗುತ್ತಿರುವ ಪರಿಸ್ಥಿತಿಗೆ ನಾವು ಹೊಂದಿಕೊಂಡಾಗ ಮಾತ್ರ ಕಸುಬನ್ನು ಮುಂದುವರೆಸಲು ಸಾಧ್ಯ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

-ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್, ಸಂಘದ ಅಧ್ಯಕ್ಷ ರಾಮರಾವ್ ವಿ. ರಾಯ್ಕರ್ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

*************