×
Message

74th Republic Day

(Bengaluru), January 26, 2023

"ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಈ ಸಂದರ್ಭದಲ್ಲಿ ದೇಶಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸುತ್ತಾ, ಪ್ರಜಾಪ್ರಭುತ್ವದ ಆಶಯಗಳನ್ನು ಸಾಕಾರಗೊಳಿಸಿ, ಸದೃಢ ಹಾಗೂ ಸಮರ್ಥ ಭಾರತವನ್ನು ನಿರ್ಮಿಸುವ ಸಂಕಲ್ಪ ಮಾಡೋಣ." ಮುಖ್ಯಮಂತ್ರಿ : Basavaraj Bommai

------------------------------------------------------------------------------------------------------------------------

Shri  Sangolli Rayanna 

(Bengaluru), January 26, 2023

"ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ತಮ್ಮ ಪ್ರಾಣವನ್ನೇ ತಾಯಿ ಭಾರತಾಂಬೆಗೆ ಸಮರ್ಪಿಸಿದ ಮಹಾನ್ ದೇಶಪ್ರೇಮಿ, ರಾಣಿ ಚೆನ್ನಮ್ಮರ ಬಲಗೈ ಬಂಟ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪುಣ್ಯ ಸ್ಮರಣೆಯಂದು ಅವರಿಗೆ ಭಕ್ತಿಪೂರ್ವಕ ನಮನಗಳು." ಮುಖ್ಯಮಂತ್ರಿ : Basavaraj Bommai

 ------------------------------------------------------------------------------------------------------------------------

Shri  K. S. Narasimhaswamy 

(Bengaluru), January 26, 2023

"ಕನ್ನಡ ನಾಡು ಕಂಡ ಶ್ರೇಷ್ಠ ಪ್ರೇಮ ಕವಿ ಶ್ರೀ ಕೆ.ಎಸ್.ನರಸಿಂಹಸ್ವಾಮಿಯವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು. ಕನ್ನಡ ನಾಡಿನ ಸಾಹಿತ್ಯವನ್ನು ಶ್ರೀಮಂತಗೊಳಿಸುವಲ್ಲಿ ಅವರ ಕೊಡುಗೆ ಅಪಾರವಾಗಿದೆ." ಮುಖ್ಯಮಂತ್ರಿ : Basavaraj Bommai

 ------------------------------------------------------------------------------------------------------------------------

National Tourism Day 

(Bengaluru), January 25, 2023

"ನಾಡಿನ ಸಮಸ್ತ ಜನತೆಗೆ ರಾಷ್ಟ್ರೀಯ ಪ್ರವಾಸೋದ್ಯಮ ದಿನದ ಹಾರ್ದಿಕ ಶುಭಾಶಯಗಳು. "ಒಂದು ರಾಜ್ಯ , ಹಲವು ಜಗತ್ತುಗಳು" ಎಂಬ ಖ್ಯಾತಿ ಹೊಂದಿರುವ ಕರ್ನಾಟಕ ಪ್ರವಾಸಿಗರ ಪಾಲಿಗೆ ಸ್ವರ್ಗವಾಗಿದೆ. ಕರ್ನಾಟಕದ ಪ್ರವಾಸೋದ್ಯಮದ ಶ್ರೀಮಂತಿಕೆಯನ್ನು ಜಗತ್ತಿಗೆ ಸಾರಿ, ಪ್ರವಾಸೋದ್ಯಮವನ್ನು ಮತ್ತಷ್ಟು ಬಲಗೊಳಿಸುವ ಸಂಕಲ್ಪವನ್ನು ಮಾಡೋಣ." ಮುಖ್ಯಮಂತ್ರಿ: Basavaraj Bommai

 ------------------------------------------------------------------------------------------------------------------------

National Voters Day 

(Bengaluru), January 25, 2023

"ಮತದಾನ ನಮ್ಮ ಸಂವಿಧಾನ ನಮಗೆ ನೀಡಿರುವ ಅತ್ಯಮೂಲ್ಯ ಹಕ್ಕು. ತಪ್ಪದೇ ಮತದಾನದ ಕರ್ತವ್ಯದಲ್ಲಿ ಭಾಗಿಯಾಗಿ ನಮ್ಮ ಹಕ್ಕನ್ನು ಚಲಾಯಿಸೋಣ. ಎಲ್ಲಾ ಮತದಾರರಿಗೂ ರಾಷ್ಟ್ರೀಯ ಮತದಾರರ ದಿನಾಚರಣೆಯ ಶುಭಾಶಯಗಳು."ಮುಖ್ಯಮಂತ್ರಿ: Basavaraj Bommai

 ------------------------------------------------------------------------------------------------------------------------

National Girl Child Day  

(Bengaluru), January 24, 2023

"ಹೆಣ್ಣು ಮನೆಯ ಕಣ್ಣು,

ಹೆಣ್ಣು ಮನೆಯ ನಂದಾದೀಪ

ಹೆಣ್ಣು ಮನೆಯ ನೆಮ್ಮದಿ, ಸಮೃದ್ಧಿ.

ಹೆಣ್ಣು ಮಕ್ಕಳಿಗೆ ಆರೋಗ್ಯಕರ ಸುರಕ್ಷಿತ ವಾತಾವರಣ ಸೃಷ್ಟಿಸುವ ಕುರಿತು ಜಾಗೃತಿ ಮೂಡಿಸೋಣ.ಸಮಾಜದಲ್ಲಿ ಸಮಾನ ಅವಕಾಶಗಳನ್ನು ಕಲ್ಪಿಸುವ ಮೂಲಕ ಅವರ ಭವಿಷ್ಯವನ್ನು ಉಜ್ವಲಗೊಳಿಸೋಣ." ಮುಖ್ಯಮಂತ್ರಿ: Basavaraj Bommai

 ------------------------------------------------------------------------------------------------------------------------

Pandit Bhimsen Gururaj Joshi  

(Bengaluru), January 24, 2023

"ಹಿಂದೂಸ್ತಾನಿ ಸಂಗೀತ ದಿಗ್ಗಜ, ಭಾರತ ರತ್ನ ಪಂಡಿತ್ ಭೀಮಸೇನ ಜೋಶಿಯವರ ಪುಣ್ಯಸ್ಮರಣೆಯಂದು ಅವರಿಗೆ ಗೌರವಪೂರ್ವಕ ನಮನಗಳು." ಮುಖ್ಯಮಂತ್ರಿ: Basavaraj Bommai

 ------------------------------------------------------------------------------------------------------------------------

Netaji Subhash Chandra Bose 

(Bengaluru), January 23, 2023

"ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ ಎಂದು ಹೇಳುವ ಮೂಲಕ ಯುವಜನತೆಯಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜನ್ಮದಿನದಂದು ರವರಿಗೆ ಗೌರವಪೂರ್ವಕ ನಮನಗಳು." ಮುಖ್ಯಮಂತ್ರಿ: Basavaraj Bommai

 ------------------------------------------------------------------------------------------------------------------------

Sri Sri Sri Shivakumara MahaSwamiji

(Bengaluru), January 21, 2023

"ಸದ್ದುಗದ್ದಲವಿರದ ಸಾಧನೆಯಿಲ್ಲಿ ಗದ್ದುಗೆಯೇರಿದೆ,

ಕಾಯಕವೇ ಕೈಲಾಸವೆನ್ನುವ ಮಾತು ಕೃತಿಯೊಳು ಮೂಡಿದೆ

ಕಾವಿಯುಡುಗೆಯನ್ನುಟ್ಟು ನಭವೇ ಕಿರಣ ಹಸ್ತವ ಚಾಚಿದೆ

ಎಲ್ಲ ನನ್ನವರೆನ್ನುವ ಭಾವದ ಕರುಣೆಯೇ ಕಣ್ತೆರೆದಿದೆ. ತ್ರಿವಿಧ ದಾಸೋಹಿ, ಕರ್ನಾಟಕ ರತ್ನ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಪುಣ್ಯಸ್ಮರಣೆಯಂದು ಅವರಿಗೆ ಭಕ್ತಿಪೂರ್ವಕ ನಮನಗಳು." ಮುಖ್ಯಮಂತ್ರಿ: Basavaraj Bommai

 ------------------------------------------------------------------------------------------------------------------------

Nijasharana Shri Ambigara Chowdaiya

(Bengaluru), January 21, 2023

"ಅಂಬಿಗ ಅಂಬಿಗ ಎಂದು ಕುಂದ ನುಡಿಯದಿರು,

ನಂಬಿದರೆ ಒಂದೆ ಹುಟ್ಟಲಿ ಕಡೆಯ ಹಾಯಿಸುವನಂಬಿಗರ ಚೌಡಯ್ಯ

ನಾಡಿನ ಸಮಸ್ತ ಜನತೆಗೆ ಕಾಯಕಯೋಗಿ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಜಯಂತಿಯ ಹಾರ್ದಿಕ ಶುಭಾಶಯಗಳು." ಮುಖ್ಯಮಂತ್ರಿ: Basavaraj Bommai

 ------------------------------------------------------------------------------------------------------------------------

NDRF Foundation Day

(Bengaluru), January 19, 2023

"ನೈಸರ್ಗಿಕ ವಿಕೋಪದಂತಹ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಜನರನ್ನು ರಕ್ಷಿಸುವ ಎನ್.ಡಿ.ಆರ್.ಎಫ್ ನ ವೀರ ಯೋಧರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಂಸ್ಥಾಪನಾ ದಿನಾಚರಣೆಯ ಶುಭಾಶಯಗಳು." ಮುಖ್ಯಮಂತ್ರಿ: Basavaraj Bommai

 ------------------------------------------------------------------------------------------------------------------------

Sri Dr. Balagangadharanatha Mahaswamiji

(Bengaluru), January 18, 2023

"ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾಗಿದ್ದ ತ್ರಿವಿಧ ದಾಸೋಹಿ, ಪದ್ಮಭೂಷಣ, ಪರಮಪೂಜ್ಯ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು."ಮುಖ್ಯಮಂತ್ರಿ: Basavaraj Bommai

 ------------------------------------------------------------------------------------------------------------------------

Shri K S Ashwath

(Bengaluru), January 18, 2023

"ಕನ್ನಡ ಚಲನಚಿತ್ರರಂಗದ ಹಿರಿಯ ಪೋಷಕ ನಟರಾಗಿ, ತಮ್ಮ ಮನೋಜ್ಞ ಅಭಿನಯದ ಮೂಲಕ ಅಭಿಮಾನಿಗಳ ಹೃದಯ ಮಂದಿರದಲ್ಲಿ ಶಾಶ್ವತವಾಗಿ ಸ್ಥಾನ ಪಡೆದಿರುವ "ಚಾಮಯ್ಯ ಮೇಷ್ಟ್ರು", ಕೆ.ಎಸ್ ಅಶ್ವಥ್ ರವರ ಪುಣ್ಯಸ್ಮರಣೆಯಂದು ಅವರಿಗೆ ಗೌರವಪೂರ್ವಕ ನಮನಗಳು." ಮುಖ್ಯಮಂತ್ರಿ: Basavaraj Bommai

 ------------------------------------------------------------------------------------------------------------------------

Shri Krishnadevaraya

(Bengaluru), January 17, 2023

"ಕರ್ನಾಟಕದ ಸಮೃದ್ಧ ಇತಿಹಾಸದಲ್ಲಿ, ತನ್ನದೇ ಛಾಪನ್ನು ಮೂಡಿಸಿದ ವಿಜಯನಗರ ಸಾಮ್ರಾಜ್ಯದ ಅರಸ, ಕನ್ನಡ ರಾಜ್ಯರತ್ನ ಸಿಂಹಾಸನಾಧೀಶ್ವರ ಶ್ರೀ ಕೃಷ್ಣದೇವರಾಯ ಅವರ ಜಯಂತಿಯಂದು ಅವರಿಗೆ ಶ್ರದ್ಧಾ ಪೂರ್ವಕ ನಮನಗಳು.": ಮುಖ್ಯಮಂತ್ರಿ

 ------------------------------------------------------------------------------------------------------------------------

Happy Makar Sankranti

(Bengaluru), January 15, 2023

"ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಸೂರ್ಯ ಪಥ ಬದಲಿಸುವ ಈ ಶುಭ ಸಂದರ್ಭದಲ್ಲಿ ನಾಡಿನೆಲ್ಲೆಡೆ ಸುಖ, ಶಾಂತಿ ನೆಮ್ಮದಿ ಹಾಗೂ ಸಮೃದ್ಧಿ ನೆಲೆಸಲಿ, ಎಲ್ಲರಿಗೂ ಶುಭವಾಗಲಿ.": ಮುಖ್ಯಮಂತ್ರಿ

 ------------------------------------------------------------------------------------------------------------------------

Army Day

(Bengaluru), January 15, 2023

"ದೇಶದ ರಕ್ಷಣೆಗಾಗಿ ತಮ್ಮ ಜೀವವನ್ನು ಮುಡಿಪಾಗಿಟ್ಟು ದೇಶಕ್ಕೆ ಸೇವೆ ಸಲ್ಲಿಸುತ್ತಿರುವ ನಮ್ಮ ಹೆಮ್ಮೆಯ ವೀರ ಯೋಧರಿಗೆ ರಾಷ್ಟ್ರೀಯ ಸೇನಾ ದಿನಾಚರಣೆಯ ಶುಭಾಶಯಗಳು. ಈ ದಿನದಂದು ವೀರ ಯೋಧರಿಗೆ ಗೌರವ ಸಲ್ಲಿಸೋಣ.": ಮುಖ್ಯಮಂತ್ರಿ

 ------------------------------------------------------------------------------------------------------------------------

Shri Balagangadharanatha Swamiji

(Bengaluru), January 13, 2023

"ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾಗಿದ್ದ ತ್ರಿವಿಧ ದಾಸೋಹಿ, ಪದ್ಮಭೂಷಣ, ಪರಮಪೂಜ್ಯ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಪುಣ್ಯಸ್ಮರಣೆಯಂದು ಅವರಿಗೆ ಗೌರವಪೂರ್ವಕ ನಮನಗಳು.": ಮುಖ್ಯಮಂತ್ರಿ

 ------------------------------------------------------------------------------------------------------------------------

Swami Vivekananda

(Bengaluru), January 12, 2023

"ಭವ್ಯ ಭಾರತದ ನಿರ್ಮಾಣಕ್ಕಾಗಿ ಸಂಕಲ್ಪ ತೊಟ್ಟ, ಯುವಶಕ್ತಿಯ ಆದರ್ಶ, ಸ್ವಾಮಿ ವಿವೇಕಾನಂದರ ಜಯಂತಿಯಂದು ಅವರಿಗೆ ಗೌರವಪೂರ್ವಕ ನಮನಗಳು. ಮತ್ತು ನಾಡಿನ ಸಮಸ್ತ ಜನತೆಗೆ ರಾಷ್ಟ್ರೀಯ ಯುವ ದಿನದ ಹಾರ್ದಿಕ ಶುಭಾಶಯಗಳು. ಸ್ವಾಮಿ ವಿವೇಕಾನಂದರ ತೋರಿದ ಮಾರ್ಗದಲ್ಲಿ ಮುನ್ನಡೆದು , ನವಭಾರತವನ್ನು ನಿರ್ಮಿಸುವತ್ತ ಮುನ್ನಡೆಯೋಣ.": ಮುಖ್ಯಮಂತ್ರಿ

 ------------------------------------------------------------------------------------------------------------------------

Ramakrishna Hegde

(Bengaluru), January 12, 2023

"ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವರು ಮತ್ತು ಹಿರಿಯ ರಾಜಕೀಯ ಮುತ್ಸದ್ದಿ ದಿ.ರಾಮಕೃಷ್ಣ ಹೆಗಡೆಯವರ ಪುಣ್ಯ ಸ್ಮರಣೆಯಂದು ಅವರಿಗೆ ಗೌರವಪೂರ್ವಕ ನಮನಗಳು.ಇಡೀ ದೇಶಕ್ಕೆ ಮಾದರಿಯಾಗುವಂತಹ ಪಂಚಾಯತ್ ರಾಜ್ ವ್ಯವಸ್ಥೆ ಸೇರಿದಂತೆ ಈ ನಾಡಿಗೆ ಅವರು ಸಲ್ಲಿಸಿದ ಕೊಡುಗೆಗಳು ಅವಿಸ್ಮರಣೀಯವಾದುದು.": ಮುಖ್ಯಮಂತ್ರಿ

 ------------------------------------------------------------------------------------------------------------------------

Bharat Ratna Shri Lal Bahadur Shastri

(Bengaluru), January 11, 2023

"ಜೈ ಜವಾನ್ ಜೈ ಕಿಸಾನ್ ಎಂಬ ಧ್ಯೇಯ ಮಂತ್ರ ಸಾರಿದ್ದ ಭಾರತದ ಮಾಜಿ ಪ್ರಧಾನಮಂತ್ರಿ, ಭಾರತರತ್ನ ಲಾಲ್ ಬಹದ್ದೂರ್ ಶಾಸ್ತ್ರಿಯವರ ಪುಣ್ಯಸ್ಮರಣೆಯಂದು ಅವರಿಗೆ ಶ್ರದ್ಧಾಪೂರ್ವಕ ನಮನಗಳು. ಅವರ ದೇಶಭಕ್ತಿ, ಆದರ್ಶ, ಪ್ರಾಮಾಣಿಕತೆ ಕೋಟ್ಯಂತರ ಭಾರತೀಯರಿಗೆ ಸ್ಪೂರ್ತಿಯ ಚಿಲುಮೆಯಾಗಿವೆ.": ಮುಖ್ಯಮಂತ್ರಿ

 ------------------------------------------------------------------------------------------------------------------------

Shri Rahul Dravid

(Bengaluru), January 11, 2023

"ಅಂತಾರಾಷ್ಟ್ರೀಯ ಕ್ರಿಕೆಟ್ ಜಗತ್ತಿನಲ್ಲಿ "ದಿ ವಾಲ್" ಎಂದೇ ಖ್ಯಾತರಾದ ಹೆಮ್ಮೆಯ ಕನ್ನಡಿಗ, ಸವ್ಯಸಾಚಿ ಕ್ರಿಕೆಟಿಗ ಶ್ರೀ ರಾಹುಲ್ ದ್ರಾವಿಡ್ ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನಿಮ್ಮ ಕೋಚಿಂಗ್ ಅವಧಿಯಲ್ಲಿ ಭಾರತ ಕ್ರಿಕೆಟ್ ತಂಡ 2023ರ ವಿಶ್ವಕಪ್ ಗೆದ್ದು ಬರಲಿ ಎಂದು ಹಾರೈಸುತ್ತೇನೆ.": ಮುಖ್ಯಮಂತ್ರಿ

 ------------------------------------------------------------------------------------------------------------------------

Padma Vibhushan Shri K.J. Yesudas

(Bengaluru), January 10, 2023

"ಭಾರತೀಯ ಚಲನಚಿತ್ರರಂಗದ ಸುಪ್ರಸಿದ್ಧ ಗಾಯಕ, ಗಾನಗಂಧರ್ವ ಪದ್ಮವಿಭೂಷಣ ಶ್ರೀ ಕೆ.ಜೆ.ಏಸುದಾಸ್ ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಈ ಶುಭ ಸಂದರ್ಭದಲ್ಲಿ ದೇವರು ನಿಮಗೆ ಉತ್ತಮ ಆಯುರಾರೋಗ್ಯ ನೀಡಿ ಮತ್ತಷ್ಟು ಹರಸಲಿ ಎಂದು ಪ್ರಾರ್ಥಿಸುತ್ತೇನೆ."ಮುಖ್ಯಮಂತ್ರಿ

 ------------------------------------------------------------------------------------------------------------------------

Pravasi Bharatiya Divas

(Bengaluru), January 09, 2023

"ದೇಶದ ಸರ್ವತೋಮುಖ ಅಭಿವೃದ್ಧಿಗೆ ಅನಿವಾಸಿ ಭಾರತೀಯರ ಕೊಡುಗೆ ಸಹ ಅಪಾರವಾದುದು. ಪ್ರಪಂಚದ ವಿವಿಧ ಮೂಲೆಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಅವರು ನಮ್ಮ ಸಂಸ್ಕೃತಿಯ ರಾಯಭಾರಿಗಳಾಗಿ ಕೆಲಸ ಮಾಡುತ್ತಾರೆ. ಆ ಎಲ್ಲಾ ಅನಿವಾಸಿ ಭಾರತೀಯರಿಗೆ "ಪ್ರವಾಸಿ ಭಾರತೀಯ ದಿನ"ದ ಹಾರ್ದಿಕ ಶುಭಾಶಯಗಳು." ಮುಖ್ಯಮಂತ್ರಿ

 ------------------------------------------------------------------------------------------------------------------------

Mahayogi Sri Vemana's Jayanti

(Bengaluru), January 08, 2023

"ನಾಡಿನ ಸಮಸ್ತ ಜನತೆಗೆ ಸಂತ, ದಾರ್ಶನಿಕ, ಶ್ರೇಷ್ಠ ವಚನಕಾರ, ಜನಸಾಮಾನ್ಯರ ಕವಿ, ಮಹಾಯೋಗಿ ಶ್ರೀ ವೇಮನರ ಜಯಂತಿಯ ಹಾರ್ದಿಕ ಶುಭಾಶಯಗಳು." ಮುಖ್ಯಮಂತ್ರಿ

 ------------------------------------------------------------------------------------------------------------------------

86th All India Kannada Sahitya Sammelana

(Haveri), January 06, 2023

"ಇಂದಿನಿಂದ ಮೂರು ದಿನಗಳ ಕಾಲ ಏಲಕ್ಕಿ ನಾಡು, ನನ್ನ ತವರು ಜಿಲ್ಲೆ ಹಾವೇರಿಯಲ್ಲಿ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶುಭವಾಗಲಿ. ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಸಮ್ಮೇಳನವನ್ನು ಯಶಸ್ವಿಗೊಳಿಸಿ ಎಂದು ಕೋರುತ್ತೇನೆ".

"ಕನ್ನಡವೇ ಸತ್ಯ, ಕನ್ನಡವೇ ನಿತ್ಯ" ಮುಖ್ಯಮಂತ್ರಿ

 ------------------------------------------------------------------------------------------------------------------------

National Bird day

(Bengaluru), January 05, 2023

"ಪಕ್ಷಿಗಳು ಸ್ವಾತಂತ್ರ್ಯದ ದ್ಯೋತಕ. ಪಕ್ಷಿಗಳು ನಮ್ಮ ಪರಿಸರ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿವೆ.ಪಕ್ಷಿ ಸಂಕುಲಗಳ ಸಂರಕ್ಷಣೆಯ ಸಂಕಲ್ಪ ನಮ್ಮದಾಗಲಿ.": ಮುಖ್ಯಮಂತ್ರಿ

 ------------------------------------------------------------------------------------------------------------------------

Savitribai Phule

(Bengaluru), January 03, 2023

"ಹೆಣ್ಣುಮಕ್ಕಳಿಗೆ ವಿದ್ಯೆಯನ್ನು ನಿರಾಕರಿಸಿದ ಸಮಾಜವನ್ನು ದಿಟ್ಟತನದಿಂದ ಎದುರಿಸಿ, ನೋವು ಮತ್ತು ಅವಮಾನಗಳನ್ನು ಮೆಟ್ಟಿ ನಿಂತು, ಶಾಲೆ ಆರಂಭಿಸಿ, ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲು ಆರಂಭಿಸಿದ ಭಾರತದ ಮೊಟ್ಟಮೊದಲ ಮಹಿಳಾ ಶಿಕ್ಷಕಿ, ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು." ಮುಖ್ಯಮಂತ್ರಿ.

 ------------------------------------------------------------------------------------------------------------------------

Sri Vaikuntha Ekadashi 

(Bengaluru), January 02, 2023

"ತಮ್ಮ ಸರಳ ಹಾಗೂ ಸುಂದರ ಕೀರ್ತನೆಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದಲು ಯತ್ನಿಸಿದ ದಾಸವರೇಣ್ಯ, ದಾಸ ಶ್ರೇಷ್ಠ ಶ್ರೀ ಪುರಂದರದಾಸರ ಪುಣ್ಯ ಸ್ಮರಣೆಯಂದು ಅವರಿಗೆ ಭಕ್ತಿಪೂರ್ವಕ ನಮನಗಳು: ಮುಖ್ಯಮಂತ್ರಿ

 ------------------------------------------------------------------------------------------------------------------------

Respectful salutations to Sri Purandara Das: Chief Minister

(Bengaluru), January 02, 2023

"ತಮ್ಮ ಸರಳ ಹಾಗೂ ಸುಂದರ ಕೀರ್ತನೆಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದಲು ಯತ್ನಿಸಿದ ದಾಸವರೇಣ್ಯ, ದಾಸ ಶ್ರೇಷ್ಠ ಶ್ರೀ ಪುರಂದರದಾಸರ ಪುಣ್ಯ ಸ್ಮರಣೆಯಂದು ಅವರಿಗೆ ಭಕ್ತಿಪೂರ್ವಕ ನಮನಗಳು: ಮುಖ್ಯಮಂತ್ರಿ

 ------------------------------------------------------------------------------------------------------------------------

Happy New Year to all the people of the Karnataka: Chief Minister

(Bengaluru), January 01, 2023

"ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. 2023 ನಿಮ್ಮೆಲ್ಲರ ಬಾಳಿನಲ್ಲಿ ಸುಖ, ಶಾಂತಿ ನೆಮ್ಮದಿ ಹಾಗೂ ಸಮೃದ್ಧಿಯನ್ನು ತರಲಿ ಎಂದು ಶುಭ ಹಾರೈಸುತ್ತೇನೆ." ಮುಖ್ಯಮಂತ್ರಿ

 ------------------------------------------------------------------------------------------------------------------------

 ಮುಖ್ಯಮಂತ್ರಿ ಅವರಿಂದ ನಾಡಿನ ಸಮಸ್ತ ಜನತೆಗೆ 75ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

(ಬೆಂಗಳೂರು), ಆಗಸ್ಟ್ 15, 2021

ಮುಖ್ಯಮಂತ್ರಿ ಅವರಿಂದ ನಾಡಿನ ಸಮಸ್ತ ಜನತೆಗೆ 75ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.

 ------------------------------------------------------------------------------------------------------------------------

ಬ್ರಿಟಿಷರ ವಿರುದ್ಧ ಹೋರಾಡಿದ ಕೆಚ್ಚೆದೆಯ ಸ್ವಾತಂತ್ರ್ಯ ಯೋಧ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜಯಂತಿಯಂದು ಅವರಿಗೆ ಮುಖ್ಯಮಂತ್ರಿ ಅವರಿಂದ ಶ್ರದ್ಧಾಪೂರ್ವಕ ಪ್ರಣಾಮಗಳು

(ಬೆಂಗಳೂರು), ಆಗಸ್ಟ್ 15, 2021

ಬ್ರಿಟಿಷರ ವಿರುದ್ಧ ಹೋರಾಡಿದ ಕೆಚ್ಚೆದೆಯ ಸ್ವಾತಂತ್ರ್ಯ ಯೋಧ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜಯಂತಿಯಂದು ಅವರಿಗೆ ಮುಖ್ಯಮಂತ್ರಿ ಅವರಿಂದ ಶ್ರದ್ಧಾಪೂರ್ವಕ ಪ್ರಣಾಮಗಳು.

×
ABOUT DULT ORGANISATIONAL STRUCTURE PROJECTS