×
ಮುಖ್ಯಮಂತ್ರಿ ಅವರು ಫಿಲಿಪ್ಸ್ ಇಂಡಿಯಾ ಇನ್ನೋವೇಶನ್ ಕ್ಯಾಂಪಸ್ ಉದ್ಘಾಟಿಸಿ ಮಾಡಿದ ಭಾಷಣದ ಹೈಲೈಟ್ಸ್

 

 

ಬೆಂಗಳೂರು, ನವೆಂಬರ್ 09, 2023:  

 

    1.ಫಿಲಿಪ್ಸ್ ಇನ್ನೊವೇಷನ್ ಕ್ಯಾಂಪಸ್ ಉದ್ಘಾಟನೆಯ ಸಂದರ್ಭದಲ್ಲಿ ನಿಮ್ಮೆಲ್ಲರನ್ನು ಉದ್ದೇಶಿಸಿ ಮಾತನಾಡುತ್ತಿರುವುದು ನನಗೆ ಅತ್ಯಂತ ಸಂತೋಷ ತಂದಿದೆ.

 

 1. ಭಾರತದ ಆರೋಗ್ಯ ಕ್ಷೇತ್ರದಲ್ಲಿ ಫಿಲಿಪ್ಸ್ ಸಂಸ್ಥೆ ಮುಂಚೂಣಿಯಲ್ಲಿದೆ. ಕಳೆದ 27 ವರ್ಷಗಳಿಂದ ಕರ್ನಾಟಕದಲ್ಲಿಯೂ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದೆ.

 

 1. ಬೆಂಗಳೂರಿನ ಫಿಲಿಪ್ಸ್ ಇನ್ನೊವೇಷನ್ ಕ್ಯಾಂಪಸ್ ಆರೋಗ್ಯ ಕ್ಷೇತ್ರದಲ್ಲಿ ಡಿಜಿಟಲ್ ಶಕ್ತಿಕೇಂದ್ರವಾಗಿದ್ದು ಆರೋಗ್ಯ ಸೇವಾ ಪರಿಹಾರಗಳನ್ನು ಒದಗಿಸುವ ಮೂಲಕ ಜಾಗತಿಕವಾಗಿ ಜನರ ಬದುಕನ್ನು ಉತ್ತಮಪಡಿಸುವ ಗುರಿಯನ್ನು ಹೊಂದಿದೆ.

 

 1. ಬೆಂಗಳೂರಿನಲ್ಲಿ ನೆಲೆಸಿರುವ ಫಿಲಿಪ್ಸ್ ಇನ್ನೊವೇಶನ್ ಕ್ಯಾಂಪಸ್ ಫಿಲಿಪ್ಸ್ ನ ಡಿಜಿಟಲ್ ಪರಿವರ್ತನೆಯನ್ನು ಭಾರತದಲ್ಲಿ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿ ಮಹತ್ವದ ಪಾತ್ರವನ್ನು ವಹಿಸಲಿದೆ.  

 

 1. 6,50,000 ಚದರ ಅಡಿ ವಿಸ್ತೀರ್ಣದ ಬೆಂಗಳೂರಿನ ಈ ಬೃಹತ್ ಆವರಣದಲ್ಲಿ ಸುಮಾರು 5000 ವೃತ್ತಿಪರರು ಕಾರ್ಯನಿರ್ವಹಿಸಬಹುದಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ.  

 

 1. ರೋಗಿಯ ಚಿಕಿತ್ಸಾ ಅನುಭವವನ್ನು ಉತ್ತಮಪಡಿಸುವ, ಉತ್ತಮ ಆರೋಗ್ಯ ಫಲಿತಾಂತಗಳನ್ನು ನೀಡುವ, ಸಿಬ್ಬಂದಿಗೂ ಕೂಡ ಉತ್ತಮ ಅನುಭವವನ್ನು  ಕಲ್ಪಿಸುವುದಲ್ಲದೇ . ಆರೋಗ್ಯ, ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.

 

 1. ಜಾಗತಿಕವಾಗಿ ಟೆಕ್‍ಹಬ್ ಎಂದು ಪರಿಗಣಿಸಲ್ಪಡುವ ಬೆಂಗಳೂರು ನಗರಕ್ಕೆ ಇನ್ನೊವೇಶನ್ ಕೇಂದ್ರ ಮತ್ತೊಂದು ಗರಿ ಮೂಡಿಸಲಿದೆ ಎಂದು ನಾನು ನಂಬಿದ್ದೇನೆ.

 

 1. ನೆದರ್‍ಲ್ಯಾಂಡಿನ ಪ್ರಧಾನಮಂತ್ರಿ ಶ್ರೀ ಮಾರ್ಕ್ ರುಟ್ ಅವರು ಕೆಲವು ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಭೇಟಿ ನೀಡಿರುವುದನ್ನು ಕರ್ನಾಟಕ ಸರ್ಕಾರ ಶ್ಲಾಘಿಸುತ್ತದೆ.

 

 1. ಕರ್ನಾಟಕ ಆರೋಗ್ಯ ಕ್ಷೇತ್ರದಲ್ಲಿ ಭಾರತದಲ್ಲಿಯೇ ಮುಂಚೂಣಿಯಲ್ಲಿರುವ ರಾಜ್ಯ. ಸಂಶೋಧನಾ ಸಂಸ್ಥೆಗಳು, ಔಷಧ ಕಂಪನಿಗಳು,  ವೈದ್ಯಕೀಯ ವಸ್ತುಗಳ ಉತ್ಪಾದನೆಗೆ ನಮ್ಮ ರಾಜ್ಯ ಹೆಸರುವಾಸಿಯಾಗಿದೆ.

 

 1. ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು ನೀಡಿರುವುದು ಈ ವಲಯದ ಅಭಿವೃದ್ಧಿಗೆ ಇಂಬು ನೀಡಿರುವುದಲ್ಲದೇ ರಾಜ್ಯದ ಆರ್ಥಿಕತೆ ಪ್ರಮುಖ ಕೊಡುಗೆ ನೀಡಿದೆ.

 

 1. ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‍ಸಿ), ನ್ಯಾಷನಲ್ ಸೆಂಟರ್ ಫಾರ್ ಬಯಲಾಜಿಕಲ್ ಸೈನ್ಸಸ್ ಹಾಗೂ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ( ನಿಮ್ಹಾನ್ಸ್) sಸಂಸ್ಥೆಗಳು ಅಪಾರ ಸಂಖ್ಯೆಯಲ್ಲಿ ಅರ್ಹ ಆರೋಗ್ಯ ಸೇವಾ ವೃತ್ತಿಪರರನ್ನು ಉತ್ಪಾದಿಸುತ್ತಿದೆ.

 

 1. ಜಾಗತಿಕ ಆರೋಗ್ಯ ಸೇವಾ ಉದ್ಯಮದಲ್ಲಿ ಕ್ರಾಂತಿಯನ್ನು ತರಲು ಅತ್ಯಾಧುನಿಕ ತಂತ್ರಜ್ಞಾನದ ಬಳಕೆ ಮಾಡಲು ಹಲವಾರು ಆರೋಗ್ಯ ಸೇವಾ ಸಂಸ್ಥೆಗಳಿಗೆ ಕರ್ನಾಟಕ ನೆಲೆಯಾಗಿದೆ.

 

 1. ಕರ್ನಾಟಕದ ಸ್ಟಾರ್ಟ್ ಅಪ್ ವಾತಾವರಣದಲ್ಲಿ ಅನೇಕ ಆರೋಗ್ಯ ಸೇವಾ ಹಾಗೂ ಜೀವ ವಿಜ್ಞಾನ ಸ್ಟಾರ್ಟ್ ಅಪ್‍ಗಳಿದ್ದು, ನಾವೀನ್ಯತಾ ಪರಿಹಾರಗಳ ಕುರಿತು ಕಾರ್ಯನಿರ್ವಹಿಸುತ್ತಿರುವ ಸ್ಟಾರ್ಟ್ ಅಪ್ ಗಳನ್ನು ಕೂಡ ಒಳಗೊಂಡಿದೆ.  ಡಿಜಿಟಲ್ ಆರೋಗ್ಯ, ವೈಯಕ್ತಿಕ ಔಷಧ ಮತ್ತು ಔಷಧ ಅನ್ವೇಷಣೆಯತ್ತ ಈ ಸ್ಟಾರ್ಟ್ ಅಪ್‍ಗಳು ಗಮನಹರಿಸುತ್ತಿವೆ.

 

 1. ಕರ್ನಾಟಕ ಸರ್ಕಾರವು ಆರೋಗ್ಯ ಸೇವಾ ವಲಯದಲ್ಲಿ ತಂತ್ರಜ್ಞಾನ ನಾವೀನ್ಯತೆಗಳ ಮೂಲಕ ದಾಪುಗಾಲನ್ನು ಇರಿಸುವ ಮೂಲಕ  ಸೇವಾವಲಯದಲ್ಲಿ ಮಾದರಿ ರಾಜ್ಯವೆಂದು ಗುರುತಿಸಿಕೊಂಡಿದೆ. ಬೆಂಗಳೂರು ಬಯೋ ಇನ್ನೊವೇಶನ್ ಸೆಂಟರ್ (ಬಿಬಿಸಿ), ಕರ್ನಾಟಕ ಬಯೋಟೆಕ್ನಾಲಜಿ ನೀತಿ, ಸ್ಟಾರ್ಟ್ ಅಪ್‍ಗಳನ್ನು ಪ್ರಾರಂಭಿಸಲು ಬಯೋ ವೆಂಚರ್ ನಿಧಿ, ಮತ್ತಿತರ ಸೌಲಭ್ಯಗಳನ್ನು ನಮ್ಮ ಸರ್ಕಾರ ಒದಗಿಸುತ್ತಿದೆ.

 

 1. ಮುಂಚೂಣಿಯಲ್ಲಿರುವ ಭಾರತೀಯ ಹಾಗೂ ಜಾಗತಿಕ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಕರ್ನಾಟಕ ಹೂಡಿಕೆಗೆ ನೆಚ್ಚಿನ ತಾಣ ಎಂದು ಗುರುತಿಸಲ್ಪಟ್ಟಿದೆ.

 

 1. ಇಂದಿನ ಅವಶ್ಯಕತೆಗಳಿಗೆ ಪೂರಕವಾಗಿರುವಂತೆ ಪ್ರತಿಭೆಗಳನ್ನು ರೂಪಿಸುವ, ಸುಧಾರಿತ ಮೂಲಸೌಕರ್ಯಗಳು,  ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಹಾಗೂ ಜಾಗತಿಕ ಇನ್ನೊವೇಸನ್ ಹಬ್ ಎಂದು ಕರ್ನಾಟಕವನ್ನು ಬ್ರಾಂಡ್ ಮಾಡುವುದು ನಮ್ಮ ಸರ್ಕಾರದ ಕೆಲವು ಆದ್ಯತೆಗಳು.

 

 1. ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಬಗ್ಗೆ ಮಾತನಾಡುತ್ತಿರುವ ಈ ಸಂದರ್ಭದಲ್ಲಿ – 2022 ರಲ್ಲಿ ಕರ್ನಾಟಕ ಟಾಪ್ ಅಚೀವರ್ ಶ್ರೇಣಿಯನ್ನು ಪಡೆದಿದೆ ಎಂದು ನಿಮ್ಮ ಗಮನಕ್ಕೆ ತರಲಿಚ್ಚಿಸುತ್ತೇನೆ.

 

 1. ಕರ್ನಾಟಕದಲ್ಲಿ ಕೈಗಾರಿಕಾ ಸ್ನೇಹಿ, ಹೂಡಿಕೆ, ಪ್ರತಿಭೆ ಹಾಗೂ ಅವಕಾಶಗಳಿಗೆ ಪೂರಕವಾದ ನೀತಿಗಳನ್ನು ರೂಪಿಸಲು ಸರ್ಕಾರ ಉತ್ಸುಕವಾಗಿದೆ.

 

 1. ಕರ್ನಾಟಕ ನಾವಿನ್ಯತೆಗೆ ಹಾಗೂ ತಮ್ಮ ವ್ಯವಹಾರವನ್ನು ವೃದ್ಧಿಸಬಹುದಾದ ಎಂಡ್ ಟು ಎಂಡ್ ವಾತಾವರಣವನ್ನು ಹೊಂದಿರುವ ಕೇಂದ್ರ ಎಂದು ಕೈಗಾರಿಕೆಗಳು ಗುರುತಿಸುವಂತಾಗಬೇಕು ಎನ್ನುವುದು ನಮ್ಮ ಆಶಯ.  

 

 1. ಈ ಕಾರ್ಯಸೂಚಿಯನ್ನು ನಮ್ಮ ನೀತಿಗಳು ಹಾಗೂ ಕಾರ್ಯಕ್ರಮಗಳು ಬೆಂಬಲಿಸುವಂತಿದೆ.  ಸ್ಟಾರ್ಟ್ ಅಪ್, ಐಟಿ, ಎವಿಜಿಸಿ, ಬಯೋಟೆಕ್ನಾಲಜಿ ಹಾಗೂ ಇಎಸ್‍ಡಿಎಂಗಳಿಗೆ ನಿರ್ದಿಷ್ಟವಾದ ನೀತಿಗಳನ್ನು ರೂಪಿಸಿದ ಮೊದಲ ರಾಜ್ಯ ಕರ್ನಾಟಕ.

 

 1. ನನ್ನ ಮಾತುಗಳನ್ನು ಮುಗಿಸುವ ಮುನ್ನ,  ಬೆಂಗಳೂಟು ಟೆಕ್ ಸಮ್ಮಿಟ್- 2023 ರಲ್ಲಿ ಭಾಗವಹಿಸುವಂತೆ ತಮ್ಮೆಲ್ಲರನ್ನು ನಾನು ಆಹ್ವಾನಿಸುತ್ತೇನೆ.   ಕಳೆದ 25 ವರ್ಷಗಳಿಂದ ಬೆಂಗಳೂರು ಟೆಕ್ ಸಮ್ಮಿಟ್ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿದೆ.  ತಂತ್ರಜ್ಞಾನ ಹಾಗೂ ನಾವೀನ್ಯತೆಯಲ್ಲಿನ ಅತ್ಯುತ್ತಮವಾದವರನ್ನು ಒಂದೆಡೆ ಸೇರಿಸುವ ಪರಿಣಾಮಕಾರಿ ವೇದಿಕೆಯಾಗಿದೆ.

 

 1. ಭಾರತ ಮತ್ತು ಕರ್ನಾಟಕವನ್ನು ತಂತ್ರಜಾÐನ ಹಾಗೂ ನಾವೀನ್ಯತಾ ಕೇಂದ್ರವಾಗಿಸಲು ಹಾಗೂ ನಮ್ಮ ನಡುವಿನ ಸಂಬಂಧವನ್ನು ಎಲ್ಲಾ ಕ್ಷೇತ್ರಗಳಲ್ಲಿ ಬಲಪಡಿಸಲು ನಾವು ಒಟ್ಟಾಗಿ ಪಯಣಿಸೋಣ. ಒಟ್ಟಾಗಿ ಕಲಿತು, ಒಟ್ಟಾಗಿ ಬೆಳೆಯೋಣ.

 

ಧನ್ಯವಾದಗಳು.

**********

 

 

×
ABOUT DULT ORGANISATIONAL STRUCTURE PROJECTS