ಬಸವರಾಜ ಬೊಮ್ಮಾಯಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಮೆಟ್ರೋ ಮಾರ್ಗಗಳು ರಾಮನಗರ, ರಾಜಾನಕುಂಟೆಯವರೆಗೆ ವಿಸ್ತರಣೆಯಾಗಬೇಕು - ಮುಖ್ಯಮಂತ್ರಿ

know_the_cm

(ಬೆಂಗಳೂರು), ಆಗಸ್ಟ್ 29, 2021

-ಕೆಂಗೇರಿವರೆಗಿನ ವಿಸ್ತರಿತ ಮೆಟ್ರೋ ಮಾರ್ಗದಿಂದ ಅಭಿವೃದ್ಧಿಯ ನವಯುಗ ಪ್ರಾರಂಭವಾಗಿದೆ. ಮೆಟ್ರೋ ಮಾರ್ಗಗಳು ರಾಮನಗರ, ಮಾಗಡಿ ಮತ್ತು ರಾಜಾನಕುಂಟೆವರೆಗೂ ವಿಸ್ತರಣೆಯಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

-ಮೈಸೂರು ರಸ್ತೆಯಿಂದ ಕೆಂಗೇರಿವರೆಗಿನ ೭.೫ ಕಿ.ಮೀ ಮೆಟ್ರೋ ಮಾರ್ಗವನ್ನು ಉದ್ಘಾಟಿಸಿದ ನಂತರ ಅವರು ಮಾತನಾಡಿದರು‌.‌

-ಮೆಟ್ರೋ ವಿಸ್ತರಣೆಗೆ ಸಂಬಂಧಿಸಿದಂತೆ ಯೋಜನೆಯನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೆಂಪೇಗೌಡರ ಹೆಜ್ಜೆಗುರುತಿನಲ್ಲಿ ಇಂದಿನ ಆಧುನಿಕ ಅವಶ್ಯಕತೆಯನ್ನು ಗಮನದಲ್ಲಿರಿಸಿಕೊಂಡು ಬೆಂಗಳೂರನ್ನು ಕಟ್ಟಲು ಎಲ್ಲರೂ ಕೈಜೋಡಿಸುವಂತೆ ಮುಖ್ಯಮಂತ್ರಿಗಳು ಕರೆ ನೀಡಿದರು.

-ನಗರದಲ್ಲಿ ಒಟ್ಟು 317 ಕಿ.ಮೀ ಮೆಟ್ರೋ ಮಾರ್ಗ ಆಗಬೇಕು. ಇಂದು ಉದ್ಘಾಟಿಸಲಾಗಿರುವ 7.5 ಕಿ.ಮೀ ಸೇರಿದಂತೆ ಈವರೆಗೆ 56 ಕಿ.ಮೀ ಸಾಧನೆ ಆಗಿದೆ. ಮುಂದಿನ ವರ್ಷ 36 ಕಿ.ಮೀ ಸಾಧನೆ ಮಾಡಲಾಗುವುದು ಎಂದು ಅವರು ಹೇಳಿದರು‌.

-ಬೆಂಗಳೂರು ಅಭಿವೃದ್ಧಿಯಾದರೆ ಕರ್ನಾಟಕ ಅಭಿವೃದ್ಧಿಯಾಗುತ್ತದೆ. ಕರ್ನಾಟಕ ಅಭಿವೃದ್ಧಿಯಾದರೆ ಭಾರತ ಅಭಿವೃದ್ಧಿಯಾಗುತ್ತದೆ ಎಂದರು.

-ಜಿ.ಡಿ.ಪಿಗೆ ಶೇ.36 ರಷ್ಟು ಕೊಡುಗೆ ನೀಡುತ್ತಿರುವ ಬೆಂಗಳೂರು ಇನ್ನು ಹೆಚ್ಚಿನ ಕೊಡುಗೆ ನೀಡಲು ಹೂಡಿಕೆ ಅಗತ್ಯವಿದೆ, ಬೆಂಗಳೂರು ಅಮೃತ್ ನಗರೋತ್ಥಾನ ಯೋಜನೆಯನ್ನು ಘೋಷಣೆ ಕೆಲವೇ ತಿಂಗಳಲ್ಲಿ ಮಾಡಲಾಗುವುದು ಎಂದರು. ಈ ಎಲ್ಲ ಯೋಜನೆಗಳು ಕಾರ್ಯಗತವಾಗಲು ಕೇಂದ್ರ ಸರ್ಕಾರದ ನೆರವು ನಮಗೆ ದೊರೆಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

-ಉತ್ತರ ಕರ್ನಾಟಕದಲ್ಲಿ ನೂತನ ನಗರ ಕೇಂದ್ರಗಳನ್ನು ನಾವು ನಿರ್ಮಿಸಬೇಕಿದೆ. ‘ನವ ಭಾರತಕ್ಕೆ ನವ ಕರ್ನಾಟಕ; ಸ್ವರಾಜ್ಯದಿಂದ ಸುರಾಜ್ಯ’ ಎಂಬುದು ನಮ್ಮ ಘೋಷವಾಕ್ಯವಾಗಿದೆ ಎಂದರು.

*************